“ಶಾಂತಿನಿಕೇತನ ಪದವಿ ಪೂರ್ವ ಕಾಲೇಜ್ ಸಾಧನೆ”
ನಗರದ ಶಾಂತಿನಿಕೇತನ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾರ್ಚ್ ತಿಂಗಳಿನಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು
ಮಾಡಿರುತ್ತಾರೆ. ರೂಪಾ ಸಾರವಾಡ ಇವಳು-564 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ ಮತ್ತು ಪ್ರೀತಿ ಪವಾರ ಇವಳು-561 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾಳೆ ಹಾಗೂ ಶಿವರಾಜಗೌಡ ಪಾಟೀಲ-554 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿರುತ್ತಾನೆ.
ಗಣಿತ ವಿಷಯದಲ್ಲಿ ರೂಪಾ ಸಾರವಾಡ, ಅಕ್ಷತಾ ಹನಗಂಡಿ, ಅಕ್ಷತಾ ಬಿರಾದಾರ ಹಾಗೂ ಶಿವರಾಜಗೌಡ ಪಾಟೀಲ ಈ ನಾಲ್ಕು ವಿದ್ಯಾರ್ಥಿಗಳು 100/100 ಅಂಕಗಳನ್ನು ಪಡೆದಿರುತ್ತಾರೆ. ಒಟ್ಟು ಡಿಸ್ಟಿಂಕ್ಷನ್-17, ಪ್ರಥಮ ದರ್ಜೆಯಲ್ಲಿ-140, ದ್ವಿತೀಯ ದರ್ಜೆಯಲ್ಲಿ-27 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.
ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸಂಸ್ಥೆಯ ಚೇರಮನÀರಾದ ಡಾ. ಸುರೇಶ ಬಿರಾದಾರ, ಅಧ್ಯಕ್ಷೆ ಶ್ರೀಮತಿ ಶೀಲಾ ಎಸ್. ಬಿರಾದಾರ, ಶರತ ಬಿರಾದಾರ ಹಾಗೂ ಪ್ರಾಚಾರ್ಯರಾದ ಶ್ರೀ ಚಂದನಗೌಡ ಮಾಲಿಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.