Call Us
ANNUAL DAY-2020

Date

ವಿಜಯಪುರ :- ನಗರದ ಪ್ರತಿಷ್ಠಿತ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಹದಿನೆಂಟನೇ ಶಾಂತಿನಿಕೇತನ ಸಾಂಸ್ಕøತಿಕ ಉತ್ಸವ 2019-20ನೇ ಸಾಲಿನ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ರಮೇಶ ಜಿಗಜಿನಗಿ ಅವರು ಉದ್ಘಾಟಿಸಿ ಮಾತನಾಡುತ್ತಾ, ಶಾಂತಿನಿಕೇತನ ಶಿಕ್ಷಣ ಸಂಸ್ಥೆಯು ವಿಜಯಪುರ ಜಿಲ್ಲೆಯಲ್ಲಿ ಅತ್ಯುತ್ತಮ ಶಾಲೆಯಾಗಿದೆ. ಇಂತಹ ಶಾಲೆಗಳು ಬೆಳೆಯಬೇಕು, ನಾನು ಇಂತಹ ಶಿಕ್ಷಣ ಸಂಸ್ಥೆಯನ್ನು ಕಟ್ಟಿಲ್ಲ ಆದರೆ ಯಾರು ಕಟ್ಟಿದ್ದಾರೆಯೋ ಅವರಿಗೆ ನನ್ನ ಸಂಪೂರ್ಣ ಸಹಕಾರವಿದೆ. ಒಂದು ಶಿಕ್ಷಣ ಸಂಸ್ಥೆ ಚೆನ್ನಾಗಿ ಬೆಳೆಯಬೇಕಾದರೆ ಶಿಕ್ಷಕರು ಅಲ್ಲಿರುವ ಸಿಬ್ಬಂದಿ ಸಹಕಾರ ಇದ್ದರೆ ಮಾತ್ರ ಸಾದ್ಯ. ಅಂತಹ ಸಿಬ್ಬಂದಿ ಈ ಶಕ್ಷಣ ಸಂಸ್ಥೇ ಹೊಂದಿದೆ, ಈ ಸಂಸ್ಥೇ ಮುಂದಿನ ದಿನಮಾಗಳಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದರು.
ಇದೇ ಸಂದರ್ಭದಲ್ಲಿ ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ವiಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಶೃದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನಪರಿಷತ್ತಿನ ಸದಸ್ಯರಾದ ಸನ್ಮಾನ್ಯ ಶ್ರೀ ಹಣಮಂತ ನಿರಾಣ ಅವರು ಮಾತನಾಡುತ್ತಾ ಶಾಂತಿನಿಕೇತನ ಸಂಸ್ಥೆಯು ಗುಣಾತ್ಮಕ ಶಕ್ಷಣವನ್ನು ನೀಡುತ್ತಾ ಬಂದಿದೆ. ಈ ಬಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಆಕೆಲಸವನ್ನು ಈ ಸಂಸ್ಥೆ ಮಾಡಲಿ ಅದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು. ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.
ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರವರು ಅಧ್ಯಕ್ಷೀಯ ನುಡಿಯಲ್ಲಿ ಪಾಲಕರು ಕಳೆದ 18 ವರ್ಷಗಳಿಂದ ಸಂಸ್ಥೆಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಮುಂದೆನೂ ಕೂಡ ಶಾಲೆಯ ಬೆಳವಣ ಗೆಗೆ ಸಹಕರಿಸಬೇಕು ಎಂದರು ಈ ಸಂಸ್ಥೆ ಇಷ್ಟೊಂದು ಬೆಳೆಯಬೇಕಾದರೆ ಪಾಲಕರ ಹಾಗೂ ಶಿಕ್ಷಕರೇ ಕಾರಣ ಎಂದರು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೀಲಾ ಎಸ್ ಬಿರಾದಾರವರು ಬಹುಮಾನ ವಿತರಣೆ ನೆರವೇರಿಸಿದರು. ಶ್ರೀ ಗೋಪಾಲ ಕಾರ್ಜೋಳ, ಮಳುಗೌಡ ಪಾಟೀಲ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಕುಮಾರ ಶೇಕದಾರ, ಸಂಸ್ಥೆಯ ನಿರ್ದೇಶಕ ಶರತ ಬಿರಾದಾರ, ಶ್ರೀಮತಿ ದಿವ್ಯಾ ಎಸ್ ಬಿರಾದಾರ, ಭರತ ಬಿರಾದಾರ, ಶಾಲಾ ನಾಯಕಿ ಕುಮಾರಿ ಶಿವಾನಿ ಮೆಹ್ತಾ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ ಶಾಲಾ ವಾರ್ಷಿಕ ವರದಿಯನ್ನು ಓದಿದರು, ಶಾಲಾ ವಿದ್ಯಾರ್ಥಿ ಕುಮಾರಿ ವೈಷ್ಣವಿ ಮಠಪತಿ ತನ್ನ ಅನಿಸಿಕೆ ಹಂಚಿಕೊಂಡಳು. ಶಿಕ್ಷಕಿ ಶ್ರೀಮತಿ ಭಾರತಿ ಪಾಟೀಲ ಸ್ವಾಗತಿಸಿದರು, ಶಿಕ್ಷಕರಾದ ಆನಂದ ಕೋರಿಕಂತಿಮಠ, ಸಿದ್ದಣ್ಣ ಸರವಿ ಹಾಗೂ ಶ್ರೀದೇವಿ ಜೋಳದ,ಸವಿತಾ ಪಾಟೀಲ ನಿರೂಪಿಸಿದರು.
ನಂತರ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಕ್ಕಳು ಜಿಲ್ಲೆಯ, ನಾಡಿನ ಹಾಗೂ ದೇಶದ ಸಂಸ್ಕøತಿಯನ್ನು ಬಿಂಬಿಸುವ ಜಾನಪದ, ಭಕ್ತಿಗೀತೆ ಹಾಗೂ ಚಲನಚಿತ್ರ ಗೀತೆಗಳ ಹಾಡಿಗೆ ಹೆಜ್ಜೆ ಹಾಕಿದರು. ಶಿಕ್ಷಕವೃಂದ ದೀಪಾ ತಿಳಗುಳ, ಸುರೇಖಾ ಪಾಟೀಲ, ಎ.ಎಚ್.ಸಗರ, ಪ್ರವೀಣ ಗೆಣ್ಣೂರ, ವೈಶಂಪಾಯನ, ಅನೀಲ ಬಾಗೇವಾಡಿ, ಸದಾಶಿವ ಹುಗ್ಗಿ, ಅನಿತಾ ದೇಸಾಯಿ, ಎಸ್.ಆರ್.ಕಟ್ಟಿಮನಿ, ಹಫೀಜ ಹುಬ್ಬಳಿ, ಮಹ್ಮದ ಇಲಿಯಾಸ, ನಿಕಿತಾ, ಮಧುಮತಿ, ಸರೋಜಾ, ತಬಸ್ಸುಮ್, ಮಿನಾಕ್ಷಿ, ವಿದ್ಯಾಭಾರತಿ, ಶೋಭಾ, ಅವಟಿ ಆರ್.ಕೆ. ಕಡೇಮನಿ, ಮತ್ತಿತರರು ಉಪಸ್ಥಿತರಿದ್ದರು. [/vc_column_text]

More
articles

I'm searching for...