Annual Sports Meet

Date

ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ 17ನೇ ಶಾಲಾ ವಾರ್ಷಿಕ ಕ್ರೀಡಾಕೂಟ”
ನಗರದ ಪ್ರತಿಷ್ಟಿತ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 17ನೇ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು. ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಟಿ.ಎಚ್. ಮೇಲಿನಕೇರಿ, ಉಪನಿರ್ದೇಶಕರು, ದೈಹಿಕ ಶಿಕ್ಷಣ ಇಲಾಖೆ, ಕಲಬುರಗಿ ಜಿಲ್ಲೆ ಇವರು ಮಾತನಾಡುತ್ತ ಮಕ್ಕಳು ಕ್ರೀಡೆ, ಓದು ಇವುಗಳÀಲ್ಲಿ ಯಾವುದನ್ನು ಆಸಕ್ತಿಯಾಗಿ ತೆಗೆದುಕೊಂಡಿರುತ್ತಾರೆÉಯೋ ಅದನ್ನು ಶಿಕ್ಷಕರು ಮತ್ತು ಪಾಲಕರು ಗುರುತಿಸಿ ಪ್ರೋತ್ಸಾಹಿಸಬೇಕು. ಕ್ರೀಡೆಯಲ್ಲಿ ಸಾಧನೆಯನ್ನು ಮಾಡಬೇಕಾದರೆ ಸತತವಾದ ಪ್ರಯತ್ನ ಬೇಕು ಮತ್ತು ದೈಹಿಕ ಶ್ರಮ ಬೇಕು ಎಂದರು.
ಜಿಲ್ಲಾ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರು ಹಾಗೂ ಸಂಸ್ಥೆಯ ಚೇರಮನ್ ಡಾ.ಸುರೇಶ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕ್ರೀಡೆಯು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು, ಸಹಕಾರ ತತ್ವವನ್ನು ಸಹೋದರತೆಯ ಭಾವವನ್ನು ಮೂಡಿಸುತ್ತದೆ ಸಂಸ್ಥೆಯು ಮಕ್ಕಳಿಗೆ ಹಲವಾರು ಕ್ರೀಡಾ ಚಟುವಟಿಕೆಗಳನ್ನು ಹಾಕಿಕೊಳ್ಳುತ್ತ ಅವರ ಸರ್ವಾಂಗಿಣ ಬೆಳವಣ ಗೆಗೆ ಅವಕಾಶ ಒದಗಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ರಾಮಾನುಜಮ್ ಅವರ ಜನ್ಮದಿನದ ಪ್ರಯುಕ್ತವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೀಲಾ ಬಿರಾದಾರ ಹಾಗೂ ನಿರ್ದೇಶಕ ಶರತ ಬಿರಾದಾರ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಎಲ್ಲ ಕ್ರೀಡಾ ಚಟುವಟಿಕೆಗಳು ಹೊನಲುಬೆಳಕಿನಲ್ಲಿ ಜರುಗಿದವು ಮಲ್ಲಕಂಬದಲ್ಲಿ ಮಕ್ಕಳು ತಮ್ಮ ದೈಹಿಕ ಮತ್ತು ಮಾನಸಿಕ ಪ್ರ್ರಾಬಲ್ಯವನ್ನು ಮರೆದರು, ಲೇಜಿಮ್ ಕಲೆಯಲ್ಲಿ ಮಕ್ಕಳು ಸಂಗೀತದ ಜೊತೆಗೆ ವಿವಿಧ ಭಂಗಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದರು. ಶಾಲಾ ಮಕ್ಕಳು ಜುಂಬಾ ಫಿಸಿಕಲ್ ಫಿಟನೆಸ್ ತರಬೇತುದಾರರ ಜೊತೆಗೆ ಸಂಗೀತದ ಜೊತೆ ಹೆಜ್ಜೆ ಹಾಕಿದರು. ನಂತರ ಕರಾಟೆ, ಫಿರಾಮಿಡ್ ಹಾಗೂ ಮೋಟರ್‍ಬೈಕ್ ಶೋ ಪ್ರದರ್ಶಿಸಿದರು. ನಂತರ ನಡೆದ ಕ್ರೀಡೆಗಳಲ್ಲಿ ಗೆದ್ದ ಮಕ್ಕಳಿಗೆ ಪಾಲಕರಿಂದಲೇ ಪ್ರಮಾಣ ಪತ್ರ ಹಾಗೂ ಪದಕಗಳನ್ನು ಕೊಡಿಸಲಾಯಿತು.
ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ ಸ್ವಾಗತಿಸಿದರು. ಶಿಕ್ಷಕಿಯರಾದ ಮೋಸಿನಾ ಇನಾಮದಾರ ಹಾಗೂ ದೀಪಾ ತಿಳಗೋಳ ನಿರೂಪಿಸಿದರು, ಸವಿತಾ ನರಸಲಗಿ ವಂದಿಸಿದರು. ದೈಹಿಕ ಶಿಕ್ಷಕರಾದ ಎ.ಎಚ್. ಸಗರ, ಅಲಿಸಾಬ ದಡೇದ, ಪ್ರವೀಣಕುಮಾರ ಗೆಣ್ಣೂರ, ಶ್ರೀಮತಿ ಭಾರತಿ ಪಾಟೀಲ, ಸಮೀನಾ ತೊರವಿ, ವಿದ್ಯಾಭಾರತಿ ಚವ್ಹಾಣ, ಎಸ್.ಆರ್.ಕಟ್ಟಿಮನಿ, ಸದಾಶಿವ ಹುಗ್ಗಿ, ಹಫೀಜ ಹುಬ್ಬಳಿ, ಮಹ್ಮದ ಇಲಿಯಾಸ, ವಿವೇಕ ವೈಶಂಪಾಯನ, ಶ್ರೀದೇವಿ ಜೋಳದ, ಸುರೇಖಾ ಪಾಟೀಲ, ನಿಕಿತಾ ದೇವಗೀರಿಕರ, ಅನೀಲ ಬಾಗೇವಾಡಿ, ತಬಸ್ಸಮ್ ಸಾಂಗ್ಲಿಕರ, ಅಶ್ವಿನ್, ಅನೀತಾ ದೇಸಾಯಿ ಮತ್ತಿತರು ಉಪಸ್ಥಿತರಿದ್ದರು.[/vc_column_text]

More
articles

I'm searching for...