ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್‍ನಲ್ಲಿ ದಿನಾಂಕ: 28-11-2018ರಂದು ಫ್ಯಾಶನಿಸ್ಟಾ ಕಾರ್ಯಕ್ರಮ ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ವಿಧಾನ ಪರಿಷತ ಸದಸ್ಯರಾದ ಶ್ರೀ ಹಣಮಂತ ನಿರಾಣ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಮಕ್ಕಳು ರ್ಯಾಂಪ ವಾಕ್ ಬಹಳ ವಿಭಿನ್ನವಾಗಿ ಹಾಗೂ ಅತೀ ವಿಶೇಷವಾಗಿತ್ತು, ಇಂತಹ ಕಾರ್ಯಕ್ರಮ ವಿಜಯಪುರಕ್ಕೆ ಮೊಟ್ಟ ಮೊದಲಿಗೆ ನೀಡಿದ ಕೀರ್ತಿ ಎಸ್.ಎಸ್.ಬಿ. ಇವೆಂಟ್ಸ್‍ನವರಿಗೆ ಸಲ್ಲುತ್ತದೆ ಎಂದು ನುಡಿದರು. ಪ್ರಾಸ್ತಾವಿಕವಾಗಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ಈ ಕಾರ್ಯಕ್ರಮದ ಮೂಲಕ ವಿಜಯಪುರದ ಮಕ್ಕಳಿಗೆ ಹಾಗೂ ಯುವಕರಿಗೆ ಅವರ ಸಾಮಥ್ರ್ಯವನ್ನು ತೋರಿಸುವ ಅವಕಾಶ ನೀಡಲಾಗಿದೆ. ಈ ರೀತಿ ಕಾರ್ಯಕ್ರಮಗಳು ವಿಜಯಪುರದಲ್ಲಿ ಮುಂದೆ ನಡೆಯುತ್ತಾ ಇರಬೇಕು ಎಂದು ನುಡಿದರು. ಶ್ರೀ ಸಂಗನಬಸವ ಶಿವಾಚಾರ್ಯರು ಸಾನಿಧ್ಯವಹಿಸಿ ಮಾತನಾಡಿದರು. ಡಾ.ಸುರೇಶ ಬಿರಾದಾರ ರವರು ಅಧ್ಯಕ್ಷತೆವಹಿಸಿದ್ದರು. ಸುಮಾರು 125 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು. ವಿಜೇತರಿಗೆ ಮಿಸ್ಟರ್ ವಿಜಯಪುರ ಪಟ್ಟ ಹಾಗೂ ಮಕ್ಕಳ ವಿಭಾಗದಲ್ಲಿ ವಿಜೇತರಿಗೆ ಪ್ರಿನ್ಸ್ ಹಾಗೂ ಪ್ರಿನ್ಸ್‍ಸ್ ಆಫ್ ವಿಜಯಪುರ ಎಂಬ ಪಟ್ಟ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಸುನಿತಾ ಚವ್ಹಾಣ, ಗೋಪಾಲ ಘಟಕಾಂಬಳೆ, ರಾಜು ಕಳಸಗೊಂಡ, ವಿಜಯಕುಮಾರ ಶೇಖದಾರ, ವಿರಾಜ ಪಾಟೀಲ, ಶೀಲಾ ಬಿರಾದಾರ, ಶರತ ಬಿರಾದಾರ, ಸುದರ್ಶನ, ಅಕ್ಷಯ, ಅಮಿತ, ಅವಿನಾಶ, ಪಲ್ಲವಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟಿಯಾಗಿರುವ ರಂಜನಿ ರಾಘವನ್ (ಪುಟ್ಟಗೌರಿ) ಇವರು ಕಾರ್ಯಕ್ರಮದ ಕೇಂದ್ರಬಿಂದು ಆಗಿದ್ದರು ಹಾಗೂ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಮಿಸ್ಟರ್ ಇಂಡಿಯಾ ಆಗಿ, ಪುಟ್ಟಗೌರಿ ಮದುವೆ ಧಾರಾವಾಹಿಯ ಕಿರುತೆರೆಯಲ್ಲಿ ಮುಖ್ಯಪಾತ್ರವನ್ನುವಹಿಸಿ ಹಾಗೂ ಫ್ಯಾಶನಿಸ್ಟಾ ನಿರ್ಣಾಯಕರಾಗಿ ಆಗಮಿಸಿರುವ ಹರ್ಷಿತಗೌಡ ಕೂಡಾ ಆಗಮಿಸಿದ್ದರು.