ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಫೆಬ್ರುವರಿ-14ರಂದು ‘ಮಾತಾ-ಪಿತಾ ಪಾದ ಪೂಜಾ’ ಸಮಾರಂಭ ಜರುಗಿತು. ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಮನಗೂಳಿಯ ಶ್ರೀ ಸಂಗನಬಸವ ಮಹಾಸ್ವಾಮಿಗಳು, ಇವರು ವಹಿಸಿದ್ದರು. ಅವರು ಆಶೀರ್ವಚನವನ್ನು ನೀಡುತ್ತ ಫೆಬ್ರುವರಿ-14ರಂದು ಯುವಕರು ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಆದರೆ ಶಾಂತಿನಿಕೇತನ ಶಾಲೆಯ ಮಕ್ಕಳು ಈ ದಿನವನ್ನು ಅರ್ಥಪೂರ್ಣವನ್ನಾಗಿ ಆಚರಿಸುತ್ತಿದ್ದಾರೆ. ಅವರಿಗೆ ವೈಯಕ್ತಿಕ ಧನ್ಯವಾದಗಳ ಎಂದರು. ಮಕ್ಕಳು ದೊಡ್ಡವರಾಗಬೇಕಾದರೆ ತಂದೆ-ತಾಯಿಯರ ಕೊಡುಗೆ ಬಹಳ ಇರುತ್ತದೆ. ಅದಕ್ಕೆ ಮುಂದೆ ಮಕ್ಕಳು ದೊಡ್ಡವರಾದ ಮೇಲೆ ಅವರು ಋಣವನ್ನು ತೀರಿಸಬೇಕು ವೃದ್ದ್ಯಾಪ್ಯದಲ್ಲಿರುವ ತಂದೆ-ತಾಯಿಯವರನ್ನು ಪ್ರೀತಿ, ಆದರದಿಂದ ಆರೈಕೆ ಮಾಡಬೇಕು ಎಂದರು. ಮನುಷ್ಯ ಬದುಕುಬೇಕಾದರೆ ಶಿಕ್ಷಣ ಬಹಳ ಮುಖ್ಯ. ಅದಕ್ಕೆ ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು ಎಂದು ನುಡಿದರು. ಮೊದಲಿನ ಕಾಲದಲ್ಲಿ ಮಕ್ಕಳು ಬೆಳಿಗ್ಗೆ ಎದ್ದು ಹೊರ ಹೋಗುವ ಮೊದಲು ತಂದೆ-ತಾಯಿಯವರನ್ನು ನಮಸ್ಕರಿಸಿ ತಮ್ಮ ಮುಂದಿನ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ಇಂದು ಈ ಸಂಸ್ಕಾರವನ್ನು ನಾವು ಕಾಣುತ್ತಿಲ್ಲ ಅದಕ್ಕಾಗಿ ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಚೇರಮನ್ ಹಾಗೂ ವಿಜಯಪುರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾದ ಡಾ.ಸುರೇಶ ಬಿರಾದಾರ ರವರು ಅಧ್ಯಕ್ಷತೆವಹಿಸಿ ಮಾತನಾಡುತ್ತ ಫೆಬ್ರುವರಿ-14ನ್ನು ಜಗತ್ತಿನಾದ್ಯಂತ ಪ್ರೇಮಿಗಳ ದಿನಾಚರಣೆಯನ್ನಾಗಿ ಆಚರಿಸುತ್ತಾರೆ. ಆದರೆ ಇದು ಪಾಶ್ಚಾತ್ಯರ ಸಂಸ್ಕøತಿ ಆದರೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಈ ದಿನವನ್ನು ತಂದೆ-ತಾಯಿಗಳ ಪಾದ ಪೂಜೆ ಮಾಡಿ ಅರ್ಥಪೂರ್ಣವನ್ನಾಗಿ ಆಚರಿಸುತ್ತಿದ್ದಾರೆ ಈ ರೀತಿಯ ಸಂಸ್ಕøತಿಯನ್ನು ಬೆಳೆಸಬೇಕಾದ್ದು ಬಹಳ ಮುಖ್ಯ ಏಕೆಂದರೆ ನಮ್ಮ ಸಂಸ್ಕøತಿಯಲ್ಲಿ ತಂದೆ-ತಾಯಿಯಂದರಿಗೆ ಹಾಗೂ ಗುರುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇವರ ಆಶೀರ್ವಾದ ಇರುವುದರಿಂದಲೇ ಒಳ್ಳೆಯ ಸಂಸ್ಕಾರವನ್ನು ಬೆಳಸಿಕೊಳ್ಳಲು ಸಾಧ್ಯವಾಗುತ್ತದೆ. ನಾವು ಮನುಷ್ಯನಾಗಿ ಹುಟ್ಟಿದ ಮೇಲೆ ಸಂಸ್ಕಾರವಂತರಾಗಿರಬೇಕು ಅದಕ್ಕೆ ತಂದೆ-ತಾಯಿ, ಗುರುಗಳ ಆಶೀರ್ವಾದ ಬಹಳ ಮುಖ್ಯ ಎಂದು ನುಡಿದರು. ಪಾಶ್ಚಾತ್ಯ ಸಂಸ್ಕ್ರತಿಯನ್ನು ನಮ್ಮ ಮಕ್ಕಳ ಮೇಲೆ ಹೇರಲು ಪ್ರಯತ್ನಿಸಬಾರದು ಇದರಿಂದ ಮಕ್ಕಳು ದಾರಿ ತಪ್ಪುತ್ತಾರೆ. ಅದಕ್ಕಾಗಿ ಭಾರತೀಯ ಸಂಸ್ಕøತಿ, ದೇಶಭಕ್ತಿ ಮುಂತಾದ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ನಮ್ಮ ಶಾಲೆಯಲ್ಲಿ ಭಾರತೀಯ ಸಂಸ್ಕøತಿಯನ್ನು ಮಕ್ಕಳಲ್ಲಿ ಬೆಳೆಸುವಂತಹ ಹಲವಾರು ಕಾರ್ಯಕ್ರಮಗಳನ್ನು ಯಾವತ್ತೂ ಮಾಡುತ್ತಾ ಬಂದಿದ್ದೇವೆ. ಈ ದಿನವು ‘ಪಾಲಕರ ದಿನ’ ಎಂದು ಎಲ್ಲ ಭಾರತೀಯರಲ್ಲಿ ಮೂಡಬೇಕು. ಈ ಕಾರ್ಯಕ್ರಮಕ್ಕೆ ಎಲ್ಲ ಪಾಲಕರು ಭಾಗವಹಿಸಿ ಸಹಾಯ, ಸಹಕಾರ ನೀಡಿದ್ದಕ್ಕೆ ಚಿರಋಣ ಎಂದು ನುಡಿದರು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೀಲಾ ಎಸ್.ಬಿರಾದಾರ ಮಾತಾ-ಪಿತಾ ಪಾದ ಪೂಜಾ ದಿನದ ಶುಭಾಶಯ ಕೋರಿದರು. ಶ್ರೀ ಸಂಗನಬಸವ ಮಹಾಸ್ವಾಮೀಜಿಯವರು ಸಾಮೂಹಿಕ ಪಾದ ಪೂಜೆಯ ವಿಧಾನವನ್ನು ಬೋಧಿಸಿದರು. ಮಕ್ಕಳು ತಮ್ಮ ತಂದೆ-ತಾಯಿಯರ ಪಾದ ಪೂಜೆ ಮಾಡಿ. ಸಿಹಿ ಹಂಚಿ, ನಮಸ್ಕರಿಸಿ ಆಶೀರ್ವಾದ ಪಡೆದರು. ಮಕ್ಕಳು ತಂದೆ-ತಾಯಿಯವರ ಮಹತ್ವದ ಕುರಿತಾದ ನುಡಿಮುತ್ತುಗಳನ್ನು ಹೇಳಿದರು.
ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ,ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಸಿದ್ದಪ್ಪ ಸರವೆ, ಎಸ್.ಎ.ಹುಗ್ಗಿ, ಎ.ಎಚ್.ಸಗರ, ಕಾಶೀನಾಥ ಅವಟಿ, ಅನಿತಾ ದೇಸಾಯಿ, ಭಾರತಿ ಪಾಟೀಲ, ಹಫೀಜ, ವೈಶಂಪಾಯನ, ಇಲಿಯಾಸ, ತಬಸ್ಸಮ್,ಸೀಮಾ ಸದಲಗಾ, ಗಿರಿಜಾ ಕರಡಿ, ಸರೋಜಾ ಕರ್ಕಳಿ, ಇತರರು ಉಪಸ್ಥಿತರಿದ್ದರು.
ಶ್ರೀದೇವಿ ಜೋಳದ ನಿರೂಪಿಸಿದರು. ಸವಿತಾ ಪಾಟೀಲ ಸ್ವಾಗತಿಸಿದರು, ಸವಿತಾ ಡಿ. ವಂದಿಸಿದರು.