ಜೀವನದಲ್ಲಿ ಶಿಸ್ತು ಸಂಯಮವನ್ನು ರೂಡಿಸಿಕೊಂಡರೆ ಜೀವನ ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀಮತಿ ಸರೋಜಾ ಕೋಲಾರ ವಿಜಯಪುರದ ಸಂಚಾರಿ ಪೋಲಿಸ್ ಅಧಿಕಾರಿಗಳು ಮಾತನಾಡಿದರು.
ನಗರದ ಪ್ರತಿಷ್ಠಿತ ಶಾಂತಿನಿಕೇತನ ಅಂತರಾಷ್ಟ್ರಿಯ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಕಾರ್ಯಕ್ರಮದ ಚಾಲನೆ ನೀಡಿ ಇವರು ಮಾತನಾಡಿದರು.
ಈ ಶಿಕ್ಷಣ ಸಂಸ್ಥೆಯ ಕ್ರೀಯಾಶೀಲ ಅಧ್ಯಕ್ಷೆಯಾದ ಶೀಲಾ ಎಸ್ ಬಿರಾದಾರ ಅವರು ಮಾತನಾಡಿ ಮುಂದಿನ ಪೀಳಿಗೆಯ ಹೆಜ್ಜೆ ಗುರುತಾಗಿರುವ ನೀವೆಲ್ಲಾ ಮನೆಯಿಂದಲೇ ಶಿಸ್ತನ್ನು ರೂಢಿಸಿಕೊಂಡು ಶಿಸ್ತಿನ ನಾಯಕರಾಗಬೇಕು ಹಾಗೂ ಒಳ್ಳೆಯ ನಾಗರಿಕರಾಗಬೇಕು ಎಂದು ತಿಳಿಸಿದರು.
ಶಾಂತಿನಿಕೇತನ ವಿಜ್ಞಾನ ಮತ್ತು ವಾಣ ಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಚಂದನಗೌಡ ಮಾಲೀಪಾಟೀಲರು ಮಾತನಾಡಿ, ನಿಮಗೆ ವಹಿಸಿದ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಒಳ್ಳೆಯ ನಾಯಕರಾಗುವಿರಿ ಎಂದು ತಿಳಿಸಿದರು.
ಶಾಲೆಯ ಪ್ರಾಚಾರ್ಯೆರಾದ. ಚಿತ್ರಾ ಪಾಟೀಲ ಹಾಗೂ ಸರಳಾ ಕುಲಕಣ ್, ಎ.ಎಚ್ ಸಗರ್ ಮತ್ತಿತರು ಹಾಜರಿದ್ದರು.
ಶಾಲೆಯ ಮುಖ್ಯ ನಾಯಕರಾಗಿ ಸ್ವಯಂ ಬಾಹಿತಿ, ನಾಯಕಿಯಾಗಿ ವರ್ಷಾ ಬಡಿಗೇರ, ಶಿಸ್ತಿನ ನಾಯಕಿಯಾಗಿ ನಮ್ರತಾ ಬಿರಾದಾರ, ಕ್ರೀಡಾ ನಾಯಕನಾಗಿ ಮೋಹಿತ್ ಸುಲಾಖೆ ಹಾಗೂ ಇನ್ನಿತರ ನಾಯಕ ನಾಯಕಿಯರಿಗೆ ಪ್ರತಿಜ್ಞಾವಿಧಿ ಪ್ರಮಾಣ ವಚನ ಬೋಧಿಸಲಾಯಿತು.
ಪ್ರಾಚಾರ್ಯರರಾದ ಚಿತ್ರಾ ಪಾಟೀಲರು ಸ್ವಾಗತಿಸಿದರು, ವರ್ಷಾ ಬಡಿಗೇರ ವಂದಿಸಿದರು, ಶಿಕ್ಷಕಿಯರಾದ ಸ್ಮೀತಾ ರಾಠೋಡ್ ನಿರೂಪಿಸಿದರು.