Call Us
REPUBLIC DAY – 2020

Date

ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ 71ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೀಲಾ ಬಿರಾದಾರ ಮುಖ್ಯ ಅತಿಥಿಯಾಗಿ ಮಾತನಾಡುತ್ತ ನಮ್ಮ ಸಂವಿಧಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಅರಿಯಬೇಕು ಸಂವಿಧಾನವನ್ನು ಅರಿತು ಭಾರತದ ಜವಭ್ದಾರಿಯುತ ನಾಗರಿಕನಾಗಬೇಕು. ನಮ್ಮ ಸಂವಿಧಾನವು ಸರ್ವರಿಗೂ ಸಮಾನವಾದ ಅವಕಾಶಗಳನ್ನು ನೀಡಿದೆ. ಆ ಅವಕಾಶಗಳ ಪ್ರಯೋಜನವನ್ನು ಪಡೆಯಬೇಕು. ಭಾರತ ದೇಶದಲ್ಲಿ ಇಂದು ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬಹುದು ಅಷ್ಟೊಂದು ದೇಶವು ಅಭಿವದ್ಧಿಯನ್ನು ಹೊಂದಿದೆ ಎಂದು ನುಡಿದರು.
ಇದೆ ಸಂದರ್ಭದಲ್ಲಿ ಇನ್ನೊರ್ವ ಅತಿಥಿಗಳಾದ ಹವಲ್ದಾರ್ ಭೀಮಪ್ಪ ಯಳಗಂಟಿ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.

ಪ್ರಾಚಾರ್ಯರಾದ ಶ್ರೀ ಚಂದನಗೌಡ ಮಾಲಿಪಾಟೀಲ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸುಶ್ಮೀತಾ ಗೋಡೆಕರ್,ನಂದಿನಿ ಪಾಟೀಲ್,ರಾಖಿ ಪವಾರ್, ನವಲ್ ಭಾಷಣವನ್ನು ಮಾಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು.ಸಂವಿಧಾನದ ಕುರಿತು ಕಿರು ನಾಟಕವನ್ನು ಮಾಡಿದರು. ಶೈಕ್ಷಣ ಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎಸ್.ಎ. ಹುಗ್ಗಿ, ಎ.ಎಚ್ ಸಗರ, ವಿವೇಕ ವೈಶಂಪಾಯನ, ಸೀಮಾ ಸದಲಗಾ, ಸರೋಜಾ, ಗಿರಿಜಾ ಕರಡಿ, ಭಾರತಿ ಪಾಟೀಲ, ಶ್ರೀದೇವಿ ಜೋಳದ, ದೀಪಾ ತಿಳಗುಳ, ಸುರೇಖಾ ಪಾಟೀಲ,ಮಿನಾಕ್ಷಿ, ಹಫೀಜ, ತಬಸ್ಸುಮ, ಅನಿಲ ಬಾಗೇವಾಡಿ, ಮಧುಮತಿ, ಅನಿತಾ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿ ದೀಪಾ ತಿಳಗೊಳ ನಿರೂಪಿಸಿದರು, ಶಿಕ್ಷಕ ಅಶ್ವಿನ ವಗದರಗಿ ವಂದಿಸಿದರು.

More
articles

I'm searching for...