ನಗರದ ಪ್ರತಿಷ್ಟಿತ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 18ನೇ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು. ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸೋಮೇಶ ಗೆಜ್ಜಿ, PSI ಂPಒಅ ವಿಜಯಪುರ ಇವರು ಮಾತನಾಡುತ್ತ ಮಕ್ಕಳು ಪಠ್ಯ ಪುಸ್ತಕದ ಜೊತೆಗೆ ಕ್ರೀಡೆಯು ಬಹಳ ಮುಖ್ಯವಾಗಿರುತ್ತದೆ. ಮಕ್ಕಳಲ್ಲಿನ ಕ್ರೀಡಾಸಕ್ತಿಯನ್ನು ಗುರುತಿಸುವಂತಹ ಕೆಲಸವನ್ನು ಮಾಡಬೇಕು. ಅದನ್ನು ಈ ಸಂಸ್ಥೆ ಮಾಡುತ್ತೀದೆ ಎಂದರು.
ಜಿಲ್ಲಾ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರು ಹಾಗೂ ಸಂಸ್ಥೆಯ ಚೇರಮನ್ ಡಾ.ಸುರೇಶ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ದೈಹಿಕವಾಗಿ ಸದೃಡವಾಗಿದ್ದರೆ, ಮಾನಸಿಕವಾಗಿ ಸದೃಡರಾಗಿರುತ್ತಾರೆ. ಮಕ್ಕಳು ಕಲಿಕೆಯ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವವನ್ನು ಕೊಡಬೇಕು ಆಗ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ವಿಕಸನವಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾವಹಿಸುವಿಕೆ ಅತಿ ಮುಖ್ಯವಾಗಿದೆ. ಕ್ರೀಡಾಸಕ್ತಿ ಯಾರಲ್ಲಿ ಇರುತ್ತದೆಯೋ ಅವರು ಶ್ರೇಷ್ಟ ಸಾಧನೆಯನ್ನು ಮಾಡುತ್ತಾg.É ಈ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಯನ್ನು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೀಲಾ ಬಿರಾದಾರ ಶುಭ ಕೋರಿದರು.
ಲೇಜಿಮ್ ಕಲೆಯಲ್ಲಿ ಮಕ್ಕಳು ಸಂಗೀತದ ಜೊತೆಗೆ ವಿವಿಧ ಭಂಗಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದರು. ಶಾಲಾ ಮಕ್ಕಳು ಜುಂಬಾ ಫಿಸಿಕಲ್ ಫಿಟನೆಸ್ ಸಂಗೀತದ ಜೊತೆ ಹೆಜ್ಜೆ ಹಾಕಿದರು. ನಂತರ ಕರಾಟೆ, ಫಿರಾಮಿಡ್ ಹಾಗೂ ಬೈಸಿಕಲ್ ಶೋ ಪ್ರದರ್ಶಿಸಿದರು. ನಂತರ ನಡೆದ ಕ್ರೀಡೆಗಳಲ್ಲಿ ಗೆದ್ದ ಮಕ್ಕಳಿಗೆ ಪಾಲಕರಿಂದಲೇ ಪ್ರಮಾಣ ಪತ್ರ ಹಾಗೂ ಪದಕಗಳನ್ನು ಕೊಡಿಸಲಾಯಿತು.
ಸಹಶಿಕ್ಷಕಿಯಾದ ಶ್ರೀಮತಿ ಭಾರತಿ ಪಾಟೀಲ ಸ್ವಾಗತಿಸಿದರು. ಶಿಕ್ಷಕರಾದ ಆನಂದ ಕೋರಿಕಂತಿಮಠ, ಮೋಸಿನಾ ಇನಾಮದಾರ, ಸ್ಮೀತಾ ರಾತೋಡ ಹಾಗೂ ದೀಪಾ ತಿಳಗೋಳ ನಿರೂಪಿಸಿದರು, ಸೌಮ್ಯರಾಣ ಉಪ್ಪಿನ ವಂದಿಸಿದರು. ದೈಹಿಕ ಶಿಕ್ಷಕರಾದ ಎ.ಎಚ್. ಸಗರ, ಪ್ರವೀಣಕುಮಾರ ಗೆಣ್ಣೂರ, ವಿದ್ಯಾಭಾರತಿ ಚವ್ಹಾಣ, ಎಸ್.ಆರ್.ಕಟ್ಟಿಮನಿ, ಸದಾಶಿವ ಹುಗ್ಗಿ, ಹಫೀಜ ಹುಬ್ಬಳಿ, ಮಹ್ಮದ ಇಲಿಯಾಸ, ವಿವೇಕ ವೈಶಂಪಾಯನ, ಶ್ರೀದೇವಿ ಜೋಳದ, ಸುರೇಖಾ ಪಾಟೀಲ, ಸೀಮಾ ಸದಲಗ,ಶೋಭಾ ಕೂಡಗಿ, ನಿಕಿತಾ ದೇವಗೀರಿಕರ, ಅನೀಲ ಬಾಗೇವಾಡಿ, ತಬಸ್ಸಮ್ ಸಾಂಗ್ಲಿಕರ, ಅಶ್ವಿನ್, ಅನೀತಾ ದೇಸಾಯಿ ಮತ್ತಿತರು ಉಪಸ್ಥಿತರಿದ್ದರು.