Call Us
64TH KANNADA RAJYOTHSAVA

Date

ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ 64ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಸುರೇಶ ಬಿರಾದಾರರವರು ಹೊಟ್ಟೆ ಹೊರೆಯಲು ನಾವು ಹಲವಾರು ಭಾಷೆಗಳನ್ನು ನಮ್ಮ ಮನದ ಭಾಷೆ ಕನ್ನಡವಾಗಿರಬೇಕು. ಕನ್ನಡ ಭಾಷೆ ನಮ್ಮ ರಕ್ತದಲ್ಲಿದೆ ಅದನ್ನು ಪ್ರೀತಿಸಬೇಕು. ಗೌರವಿಸಬೇಕು, ಅಭಿಮಾನದಿಂದ ಕಾಣಬೇಕು. ವಿದ್ಯಾರ್ಥಿಗಳಾದ ತಾವು ಅಚ್ಚುಕಟ್ಟಾಗಿ ಕನ್ನಡವನ್ನು ಕಲಿಯಬೇಕು. ಶುದ್ಧವಾಗಿ ಮಾತನಾಡಲು,ಬರೆಯಲು ಕಲಿಯಬೇಕು. ವಿದ್ಯಾರ್ಥಿ ದೆಸೆಯಲ್ಲಿಯೆ ಕಥೆ ಕವನವನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಅಂದಾಗ ಕನ್ನಡ ಬೆಳೆಯುತ್ತದೆ, ಉಳಿಯುತ್ತದೆ.
ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಡಾ.ವಿಜಯಕುಮಾರ ಶೇಕದಾರ ಮಾತನಾಡುತ್ತ ಕನ್ನಡಿಗರಾದ ನಾವು ಕನ್ನಡ ನೆಲ ಜಲದ ಬಗ್ಗೆ ಅಭಿಮಾನ ಹೊಂದಿರಬೇಕು. ಕೇವಲ ನವೆಬಂರ 1ನೇ ತಾರಿಖಿನಂದು ಮಾತ್ರ ಅಭಿಮಾನವಿರಬಾರದು, ಅದು ನಮ್ಮ ರಕ್ತಗತವಾಗಬೇಕು.
ಮತ್ತೊರ್ವ ಅತಿಥಿಗಳಾಗಿ ಆಗಮಿಸಿದ ವಿಜಯಪುರ ಜಿಲ್ಲಾ ಕಾರಾಗೃಹದ ಜೈಲರ್ ಅದ ಶ್ರೀ ಅಂಬರೀಶ ಪುಜಾರಿಯವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ, ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ, ಅದನ್ನು ನಾವು ಬೆಳೆಸಿಕೊಂಡು ಹೋಗಬೇಕು ಎಂದರು.
ಚಿತ್ರ ಕಲಾ ಶಿಕ್ಷಕರಾದ ಶ್ರೀ ಸದಾಶಿವ ಹುಗ್ಗಿಯವರು ಕನ್ನಡ ನಾಡುನುಡಿಯ ಹಾಡಿನ ಜೊತೆಗೆ ತಮ್ಮ ಕುಂಚದಿಂದ ಸುಂದರವಾದ ವರ್ಣರಂಜಿತ ಭಾವೈಕ್ಯತೆ ತತ್ವವನ್ನು ಸಾರುವ ಚಿತ್ರವನ್ನು ಬಿಡಿಸಿದರು.
“ಭಾರಿಸು ಕನ್ನಡ ಡಿಂ ಡಿಂ ವಾ” ಎಂಬ ಗೀತೆಗೆ ಮಕ್ಕಳು ನೃತ್ಯ ಮಾಡಿದರು. ಕುಮಾರಿ ವರ್ಷಾ ಬಡಿಗೇರ, ಆಕಾಕ್ಷಾ ಬೊಂದರ್ಡೆ, ಸಾಧನಾ ಬಿರಾದಾರ, ಪ್ರಜ್ವಲ ಕನ್ನಡ ನಾಡುನುಡಿಯ ಬಗ್ಗೆ ಮಾತನಾಡಿದರು. ಕೆಜಿ ಮಕ್ಕಳ ಛದ್ಮವೇಷ ನಡೆಯಿತು.
ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಅನೀತಾ ದೇಸಾಯಿ, ಭಾರತಿ ಪಾಟೀಲ, ಎ.ಎಚ್.ಸಗರ, ಎಸ್.ಆರ್.ಕಟ್ಟಿಮನಿ, ಅನೀಲ ಬಾಗೇವಾಡಿ, ದೀಪಾ, ನಿಕಿತಾ, ವೈಶಂಪಾಯನ, sಸೀಮಾ, ಗಿರಿಜಾ, ತಬಸ್ಸುಮ್, ರೇಣುಕಾ ಕಡೆಮನಿ, ಕಾಶೀನಾಥ ಅವಟಿ ಮುಂತಾದವರು ಪಾಲ್ಗೊಂಡಿದ್ದರು.
ಶಿಕ್ಷಕಿಯರಾದ ಶ್ರೀಮತಿ ಶ್ರೀದೇವಿ ಜೋಳದ ಸ್ವಾಗತಿಸಿದರು. ದಿವ್ಯಾ ಹರೆಣ್ಣವರ, ಬಸವ್ವ ಸಜ್ಜನ ನಿರೂಪಿಸಿದರು. ಲಕ್ಷ್ಮೀ ಹಿರೇಮಠ ವಂದಿಸಿದಳು.

More
articles

I'm searching for...