Call Us
SCIENCE AND ARTS EXHIBITION

Date

ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನÀ”

ವಿಜಯಪುರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೋ: ಎಸ್. ಸಿ. ಹಿರೇಮಠ ಮತ್ತು ಪ್ರೋ: ಮೇಘರಾಜ ನಾಯಕ ಅವರು ಆಗಮಿಸಿದ್ದರು.
ಗಣ್ಯರು ನೆಹರು ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ನಂತರ ರಾಕೆಟ್ ಉಡಾವಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ತ್ರೇತಾ ಯುಗದಲ್ಲಿ ರಾವಣನು ಮಾನವ ಕುಲದ ನಾಶಕ್ಕೆ ಕಂಟಕನಾಗಿದ್ದನು. ಅದೇ ರೀತಿ ಕಲಿಯುಗದಲ್ಲಿ ರಾವಣ ಎಂದರೆ ಪ್ಲಾಸ್ಟಿಕ ಇದ್ದಂತೆ. ಈ ಪ್ಲಾಸ್ಟಿಕ್ ಮಾನವ ಕುಲ ನಾಶಕ್ಕೆ ಕಾರಣವಾಗುತ್ತಿದೆ. ರಾವಣನಿಗೆ ಹತ್ತು ತಲೆ ಇದ್ದರೆ, ಪ್ಲಾಸ್ಟಿಕನಿಂದ ಸಾವಿರಾರು ರೋಗಗಳು ಬರುತ್ತವೆ.ಅದನ್ನು ಬಳಸಬಾರದು ಎನ್ನುವಂತಹ ಪ್ಲಾಸ್ಟಿಕ ಬಾಟಲಿನಿಂದ ರಾವಣನ ಪ್ರತಿಕೃತಿಯನ್ನು ವಿದ್ಯಾರ್ಥಿಗಳು ಮಾಡಿದ್ದರು. ಅದು ಎಲ್ಲರ ಮೆಚ್ಚುಗೆಯನ್ನು ಗಳಿಸಿತು.
ಈ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ ಭಾರತದ ಉಪಗ್ರಹಗಳಾದ ಆರ್ಯಭಟ, ಭಾಸ್ಕರ 2, ಟೆಸ್ಸ್, ರೋಹಿಣ ಆರ್ ಎಸ್ 1, ಸ್ರಾಸ್ ಸಿ 2, ಐ ಆರ್ ಎಸ್ ಪಿಯು ಮುಂತಾದ ಮಾದರಿಗಳಿದ್ದವು. ಸ್ಮಾರ್ಟ್ ಸಿಟಿ, ಮಳೆ ಕೊಯ್ಲು, ವೈಜ್ಞಾನಿಕ ಕೃಷಿ ಪದ್ಧತಿ, ಜಲ ವಿದ್ಯುತ್, ವಾಯು ವಿದ್ಯುತ್, ಸೌರ ವಿದ್ಯುತ್ ಉತ್ಪಾದನೆ, ಗ್ರೈಂಡಿಂಗ ಮೇಶಿನ್, ವಾಟರ್ ಸೈಕಲ್,ಪ್ರವಾಹ ಬಂದಾಗ ಎಚ್ಚರಿಸುವ ಗಂಟೆ,ಶುದ್ಧ ನೀರಿನ ಘಟಕ,ಆಣೆಕಟ್ಟು,ವ್ಯಾಕ್ಯುಮ ಕ್ಲೀನರ್,ಉಪ್ಪು ನೀರು ಮತ್ತು ನಿಂಬೆ ಹಣ ್ಣನಿಂದ ವಿದ್ಯುತ್ ಉತ್ಪಾದನೆ, ಸೋಲಾರ್ ಸಿಸ್ಟಮ್, ಚಲನ ಶಕ್ತಿ ಮುಂತಾದ ಸುಮಾರು 200ಕ್ಕಿಂತ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳು ರೂಪಿಸಿ ಪ್ರದರ್ಶಿಸಿದರು. ಅಲ್ಲದೆ ಗಣ ತದ ಮಾದರಿಗಳಾದ ಮಾಯಾ ಚೌಕ, ಮಾಯಾ ಅಂಕಿ, ಗಣ ತದ ವಿವಿಧ ಆಕೃತಿಗಳ ಪಾರ್ಕ ಮುಂತಾದ ಮಾದರಿಗಳನ್ನು ಪ್ರದರ್ಶಿಸಿದರು. ಮಾದರಿಯ ಗ್ರಾಮ,ಭವಿಷತ್ತಿನ ಆಂಬುಲೆನ್ಸ್,ಡ್ರೋಣ, ಎ.ಟಿ.ಎಮ್ ಮಾದರಿಗಳನ್ನು ಮಾಡಿದ್ದರು. ಮಾದರಿಯ ಕ್ರೀಡಾಂಗಣ ಗಮನ ಸೆಳೆಯಿತು ಹಾಗೂ ನಿರುಪಯುಕ್ತ ವಸ್ತುಗಳಿಂದ ಹಲವಾರು ಅಲಂಕಾರಿಕ ವಸ್ತುಗಳನ್ನು ಮಾಡಿ ವಿದ್ಯಾರ್ಥಿಗಳು ಪ್ರದರ್ಶನ ಮತ್ತು ಮಾರಾಟವನ್ನು ಮಾಡಿದರು.
ವಿದ್ಯಾರ್ಥಿಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣವಾದ ವಿರುಪಾಕ್ಷ ದೇವಾಲಯ, ಲೋಟಸ್ ಮಹಲ್, ಕೋಟೆ, ಆನೆಯ ಗೃಹ,ಕಲ್ಲಿನ ರಥ, ಹೇಮಕೂೀಟ ಪರ್ವತ, ಮನ್ಮತ ತೀರ್ಥ ಮುಂತಾದ ಮಾದರಿಗಳನ್ನು ವಿದ್ಯಾರ್ಥಿಗಳು ಮಾಡಿದ್ದರು.
ಈ ಸಂದರ್ಭದಲ್ಲಿ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ಶೀಲಾ ಬಿರಾದಾರ ಹಾಗೂ ಚೇರಮನ್ ಡಾ. ಸುರೇಶ ಬಿರಾದಾರ, ಆಡಳಿತ ಮಂಡಳಿಯ ಅಧ್ಯಕ್ಷರ ಶರತ ಬಿರಾದಾರ, ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ.ಎಚ್. ಸಗರ್, ಎಸ್.ಆರ್.ಕಟ್ಟಿಮನಿ, ಭಾರತಿ ಪಾಟೀಲ್, ಸುರೇಖಾ ಪಾಟೀಲ್, ಹಫೀಜ್ ಹುಬ್ಬಳ್ಳಿ, ಮಹಮ್ಮದ ಇಲಿಯಾಸ್, ಸವಿತಾ ಪಾಟೀಲ್, ಹೀನಾ ಕೌಸರ್, ಶ್ವೇತಾ, ನಿಖಿತಾ, ರಚಿತಾ, ಆನಂದ ಕೆ, ಅನಿತಾ ದೇಸಾಯಿ,ಸೀಮಾ ಸದಲಗ, ಹುಗ್ಗಿ, ಮೊಹಸೀನಾ, ಪ್ರಭು, ಇತರರು ಉಪಸ್ಥಿತರಿದ್ದರು.

More
articles

I'm searching for...