“ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಿಂದ ಚದುರಂಗ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ”
ದಿನಾಂಕ:24-11-2018ರಂದು ಮಧುಗಿರಿಯಲ್ಲಿ ನಡೆದ 17ವರ್ಷದ ಒಳಗಿನ ವಯೋಮಿತಿಯ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಶಾಂತಿನಿಕೇತನದ ಮಯೂರ ಹನಗಂಡಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತನು ವಿಜಯಪುರ ಜಿಲ್ಲೆಯಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪ್ರಪ್ರಥಮ ಚದುರಂಗಪಟು ಆಗಿದ್ದಾನೆ. ಈ ವಿದ್ಯಾರ್ಥಿಗೆ ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ, ಅಧ್ಯಕ್ಷೆ ಶೀಲಾ ಬಿರಾದಾರ, ಪ್ರಾಚಾರ್ಯರ ಚಂದನಗೌಡ ಮಾಲಿಪಾಟೀಲ ಹಾಗೂ ದೈಹಿಕ ಶಿಕ್ಷಕರಾದ ಎ.ಎಚ್. ಸಗರ, ಭಾರತಿ ಪಾಟೀಲ, ಪ್ರವೀಣ ಗೆಣ್ಣೂರ, ಅಲಿಸಾಬ ಗಡೇದ ಹಾಗೂ ಪಾಲಕರಾದ ಶ್ರೀ ಸಂಜಯ ಹನಗಂಡಿ ಶ್ರೀಮತಿ ಸುಮನ ಸಂಜಯ ಹನಗಂಡಿರವರು ಅಭಿನಂದಿಸಿದರು. ಡಿಸೆಂಬರ್-2018ರಂದು ರಾಷ್ಟ್ರಮಟ್ಟದ ಚದುರಂಗ ಸ್ಪರ್ಧೆ ಸಿಕ್ಕಿಂನಲ್ಲಿ ನಡೆಯಲಿದ್ದು ಈ ವಿದ್ಯಾರ್ಥಿಗೆ ಶುಭ ಕೋರಿದರು.
**